ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಎಳೆಯರ ಮುಖವರ್ಣಿಕೆ

ಲೇಖಕರು : ಕೆ. ದಿನಮಣಿ ಶಾಸ್ತ್ರೀ
ಶುಕ್ರವಾರ, ಜೂನ್ 5 , 2015
ಜೂನ್ 5, 2015

ಎಳೆಯರ ಮುಖವರ್ಣಿಕೆ

ಬೆ೦ಗಳೂರು : ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್‌ ಸಂಸ್ಥೆಯು ರಂಗಸಂಪದ, ಕೋಟ, ಕಲಾಪೀಠ, ಕೋಟ, ದಾಸ ಯಕ್ಷಗಾನ ಚಾರಿಟೆಬಲ್‌ ಟ್ರಸ್ಟ್‌ , ಮರವಂತೆ ಮತ್ತು ಮಕ್ಕಳ ಮೇಳ- ಸಾಲಿಗ್ರಾಮ ಇವರ ಸಹಕಾರದಿಂದ ಯಕ್ಷಗಾನ ನೃತ್ಯ, ವಸ್ತ್ರಾಲಂಕಾರ ಮತ್ತು ಮುಖವರ್ಣಿಕೆ ಕಾರ್ಯಾಗಾರವನ್ನು ಕೋಟ ಹಂದೆ ದೇವಸ್ಥಾನದಲ್ಲಿ ನಡೆಸಿತು.

ಯಕ್ಷಗಾನ ನೃತ್ಯಾಭ್ಯಾಸಕ್ಕೆ ಮೊದಲು ಪ್ರಾಥಮಿಕ ಅಂಗಸಾಧನೆ ಮತ್ತು ವ್ಯಾಯಾಮ ಗಳನ್ನು ಮಾಡಿಸುತ್ತ ತಾಳ ಪರಿಚಯ ಮತ್ತು ಹೆಜ್ಜೆಗಳನ್ನು ಹೇಳಿಕೊಡಲಾಯಿತು. ಮುಂದೆ ಪೂರ್ವರಂಗದ ತುಣುಕುಗಳೊಂದಿಗೆ ಇತರ ನೃತ್ಯಗಳ ಅಭ್ಯಾಸ ಮಾಡಿಸಲಾಯಿತು. ಆಯಾಯ ವೇಷಗಳಿಗೆ ತಕ್ಕ ವಸ್ತ್ರಾಲಂಕಾರ, ಅಟ್ಟೆ ಕೇದಗೆ ಮುಂದಲೆ ಕಟ್ಟುವುದು, ವಿವಿಧ ಆಭರಣಗಳನ್ನು ತೊಡುವ ಕ್ರಮ ಮತ್ತು ಮುಖವರ್ಣಿಕೆಯ ಕ್ರಮಗಳನ್ನು ಪ್ರಾಯೋಗಿಕವಾಗಿ ಮಾಡಿಸಲಾಯಿತು.

ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಕೃಷ್ಣಮೂರ್ತಿ ಉರಾಳ, ಸುದರ್ಶನ ಉರಾಳ, ನರಸಿಂಹ ತುಂಗ, ಸುಜಯೀಂದ್ರ ಹಂದೆ, ನವೀನ್‌ ಕೋಟ; ಭಾಗವತರಾಗಿ ದೇವರಾಜ ದಾಸ್‌ ಮತ್ತು ಮದ್ದಲೆಯಲ್ಲಿ ಮಾಧವ ಮಣೂರು ಸಹಕರಿಸಿದ್ದರು. ಶಿಬಿರದಲ್ಲಿ ಯಕ್ಷಗಾನದ ಪ್ರಾಥಮಿಕ ಮಾಹಿತಿ ಪಡೆದ ಈ ಎಳೆಯರು ಇನ್ನಷ್ಟು ವಿಚಾರಗಳನ್ನರಿತು ಮುಂಬರುವ ದಿನಗಳಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಬೆಳಗಲಿ.







ಕೃಪೆ : http://udayavani.com




Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ